Tuesday, January 15, 2008

kuchiya aase

ಕುರ್ಚಿಯ ಆಸೆ
------------
ಇಲ್ಲೊಂದೆಡೆ ಒಬ್ಬರಿಗೆ
ಗುಡ್ಡ ದೇಹ.. ಹಣದ ದಾಹ..
ಅಂಗಿ ತೊಡಿಸಲು ಒಬ್ಬರು
ಲುಂಗಿ ಉಡಿಸಲು ಇನ್ನೊಬ್ಬರು
ಚಪ್ಪಲಿ ನೀಡಲು ಮತ್ತೊಬ್ಬರು
ಕುರ್ಚಿ ಹತ್ತಿಸಲು ಒಬ್ಬರು
ಇಳಿಸಲು ಮತ್ತೊಬ್ಬರು...
ಆದರೂ ಇವರಿಗೆ ಕುರ್ಚಿಯ ಮೇಲೆ ಅತಿಯಾಸೆ

ಅಲ್ಲೊಂದೆಡೆ ಮತ್ತೊಬ್ಬರಿಗೆ..
ಇಲ್ಲ ಅತಿ ಮೋಹ ಗಣಿ ಕಪ್ಪದಲಿ...
ವ್ಯಾಮೋಹ ಅತಿಯಾಯ್ತು ಅಪ್ಪನ ಮಾತಿನಲಿ...
ಅಪ್ಪನಿಗೆ ಮಗನಲ್ಲಿ ವ್ಯಾಮೋಹ...
ಮಗನಿಗೆ ಮತ್ತೊಂದರಲ್ಲಿ(?!) ವ್ಯಾಮೋಹ...
ಆದರೂ ಕೊನೆಗೆ ಜೊತೆಯಲ್ಲಿ...
ಅಧಿಕಾರದ ಅತಿಮೋಹ...
ಅದಕ್ಕೆಂದೇ ಇಬ್ಬರಿಗೂ ಕುರ್ಚಿಯ ಮೇಲೆ ವ್ಯಾಮೊಹ...
ಆದರೆ ನೋಡಿ...
ನನಗಿಲ್ಲ ಅಧಿಕಾರದಾಸೆ, ಗಣಿಕಪ್ಪದಾಸೆ
ಚಿತ್ರ ನಟಿಯ ಮೇಲಿನಾಸೆ...
ವಿದೇಶ ಪ್ರವಾಸದಾಸೆ, ಗ್ರಾಮ ವಾಸ್ತವ್ಯದಾಸೆ
ನನಗಿರುವುದೊಂದೇ ಆಸೆ...
ನಿಸ್ವಾರ್ಥ ದೇಶ ಸೇವೆಯಾಸೆ...
ಅದಕ್ಕೆಂದೇ ನನಗೂ ಈಗ...
ಕುರ್ಚಿಯ ಮೇಲೆ ಬಹಳ ಆಸೆ..
***************************************